Digital Library

“ಸಾವಿರ ಧ್ವನಿ ಸಮರ್ಪಣೆ”
ದಾನಗಳಲ್ಲಿ ಶ್ರೇಷ್ಠ ವಿದ್ಯಾ ದಾನ.
ವಿದ್ಯಾದಾನ ಮಾಡಲು ಶಿಕ್ಷಕರೇ ಆಗಬೇಕೆಂದೇನಿಲ್ಲ.ಈ ವಿಶಿಷ್ಟ ಶ್ರೇಷ್ಠ ಕಾರ್ಯದಲ್ಲಿ ಪಾಲ್ಗೊಳ್ಳಲು ನಿಮಗೊಂದು ಅವಕಾಶ “ಸಾವಿರ ಧ್ವನಿ ಸಮರ್ಪಣೆ”ಸಮರ್ಥನಂ ಅಂಗವಿಕಲರ ಸಂಸ್ಥೆಯು ಕಳೆದ 27 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದೆ.ಪ್ರಮುಖವಾಗಿ ಅಂಧ ವಿದ್ಯಾರ್ಥಿಗಳಿಗೆ “ಆಡಿಯೋ ಬುಕ್ಸ್” ಅಂದರೆ ಶ್ರವಣ ಪುಸ್ತಕಗಳನ್ನು ಒದಗಿಸುತ್ತ ವಿಧ್ಯಾರ್ಜನೆ ಕಾರ್ಯದಲ್ಲಿ ಮಹತ್ವದ ಸಹಾಯ ಹಸ್ತ ನೀಡುತ್ತಿದೆ. ಈ ಜ್ಞಾನ ಪೂಜೆಯಲ್ಲಿ ನಿಮ್ಮ ಧ್ವನಿಗೊಂದು ಮನ್ನಣೆ ಇಲ್ಲಿದೆ.

ಇದೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಮರ್ಥನಂ ಡಿಜಿಟಲ್ ಲೈಬ್ರರಿ ವಿಭಾಗವು “ಸಾವಿರ ಧ್ವನಿ ಸಮರ್ಪಣೆ” ಎನ್ನುವ ನಿಲುವನ್ನು ಕೈಗೊಂಡಿದೆ ನೀವು ಮಾಡಬೇಕಾದದ್ದು ಇಷ್ಟೇ, ಪ್ರತಿಯೊಬ್ಬರೂ ಒಂದೊಂದು ಕನ್ನಡ ಪುಸ್ತಕವನ್ನು ತಮ್ಮ ಧ್ವನಿಯಲ್ಲಿ ಓದುವುದರ ಮೂಲಕ ಸಾವಿರ ಶ್ರವಣ ಪುಸ್ತಕಗಳನ್ನು ಅಂಧ ವಿದ್ಯಾರ್ಥಿಗಳ ವಿದ್ಯಾರ್ಜನೆ ಸಹಾಯ ಮಾಡಬೇಕಾಗಿ ಕೋರುತ್ತೇವೆ.

 

Samarthanam Trust thanks you for believing in our cause and choosing to make a donation.

* indicates mandatory fields

Please fill PAN to avail IT exemption

 

For further queries on the initiative Contact Us at:info@samarthanam.org

Share this...

Back to Top